“ಜನರಿಂದ ನಾನು ಮೇಲೆ ಬಂದೆ
ಜನರನ್ನೇ ನನ್ನ ದೇವರೆಂದೆ
ಜನರಿದ್ದರೆ ನನ್ನ ಬೆನ್ನ ಹಿಂದೆ
ಹೋರಾಡಲು ನಾನೆಂದು ಮುಂದೆ “
ಅಣ್ಣಾವೃ ಅಭಿಮಾನಿಗಳಿಗೆ ಎಂದೂ ಮರೆಯಲಾಗದ ಉಡುಗೊರೆ ತಮ್ಮ ಚಿತ್ರದ ನಟನೆಯ ಮೂಲಕ ಕೊಟ್ಟಿರೋದು ಶಾಶ್ವತ ನೆನಪಿನಲ್ಲಿ ಉಳಿಯುತ್ತೆ, ತಮಗೆ ಎಷ್ಟೇ ತೊಂದರೆ ಇದ್ದರೂ ಅದನ್ನು ತೋರಿಸಿಕೊಳ್ಳದೆ ತಮ್ಮನ್ನು ಪ್ರೀತಿಸೋ ಅಭಿಮಾನಿಗಳ ಮುಂದೆ ನೋವನ್ನು ಲೆಕ್ಕಿಸದೆ ಅಭಿಮಾನಿಗಳ ಆಸೆಯನ್ನು ಪೂರೈಸಿದ ಏಕೈಕ ನಟ ಅಂದರೆ ನಮ್ ದೇವೃ. ಅವರು ನಟಿಸಿದ ಕೊನೆಯ ಚಿತ್ರ “ಶಬ್ಧವೇಧಿ” ಬಿಡುಗಡೆಯಾಗಿ ಇಂದಿಗೆ 21 ವಷ೯ಗಳು 💐🦚👑
ಎಸ್ ನಾರಾಯಣ್ ರವರ ಬಹು ವಷ೯ದ ಕನಸು ನನಸಾದ ಚಿತ್ರ, ಒಬ್ಬ ನಿಷ್ಠಾವಂತ ಪೋಲೀಸ್ ಅಧಿಕಾರಿಯಾಗಿ (ಸಂದೀಪ್) ತಮ್ಮ ಕೆಲಸ ನಿವ೯ಹಿಸುವ ಪಾತ್ರ ಅಣ್ಣಾವ್ರದ್ದು, ಜೊತೆಗೆ ಸಾಮಾನ್ಯ ಗೃಹಿಣಿ ಜಯಪ್ರದ (ವತ್ಸಲ) ಎಲ್ಲರಂತೆ ಆಸೆ ಇಟ್ಟುಕೊಂಡು ಬದುಕು ಸಾಗಿಸುವ ಪಾತ್ರ, ಅಣ್ಣಾವೃ ಎಷ್ಟೇ ಪ್ರಾಮಾಣಿಕದಿಂದ ದುಡಿದರೂ ಡ್ರಗ್ಸ್ ಮಾಫಿಯಾ ತಡೆಗಟ್ಟಲು ನಿವ೯ಹಿಸಿರುವುದು, ಪೋಲಿಸ್ ಕಮಿಷನರ್ ಆಗಿ ಹಿರಿಯ ಪೋಷಕ ಕಲಾವಿದರಾದ ಕೆ. ಎಸ್. ಅಶ್ವಥ್ ರವರು ಅಮಾಯಕರಂತೆ ವತಿ೯ಸುವುದು, ಕೊನೆಯಲ್ಲಿ ಇವರೇ ಖಳನಾಯಕ ಎಂದು ಗೊತ್ತಾಗುವುದು.
ಮಧ್ಯದಲ್ಲಿ ತಮ್ಮ ಮಗ ಡ್ರಗ್ಸ್ ಗೆ ದಾಸನಾಗಿರುವುದನ್ನು ತಡೆಗಟ್ಟಲು ಪಡುವ ಕಷ್ಟ ಅಷ್ಟಿಷ್ಟಲ್ಲ, ತಾಯಿ ಮಗನನ್ನು ಉಳಿಸಲು ಅವರ ಬಳಿ ಹಣವಿಲ್ಲದ ಕಾರಣ ಖಳನಾಯಕ ಸ್ನೇಹಿತ ಬಳಿ ಮೊರೆ ಹೋಗಿ ತಮ್ಮ ಮಗನನ್ನು ಉಳಿಸಿಕೊಳ್ಳಲು ತಮ್ಮ ಬಳಿಇರುವ ಕ್ಯಾಸೆಟ್ ನೀಡಬೇಕೆಂದು ಕೇಳಿದಾಗ ಮಗನ ಜೀವ ಮುಖ್ಯ ಎಂದು ಅರಿತು ಪತಿಗೆ ಗೊತ್ತಾಗದ ಹಾಗೆ ಅವರಿಗೆ ನೀಡಿ ಮಗನನ್ನು ಉಳೀಸಿಕೊಳ್ಳುವುದು, ಈ ವಿಷಯ ತಿಳಿದು ನಾಯಕ ತಮ್ಮ ಸ್ವಂತ ಮಡದಿಯ ಮೇಲೆ ಕೇಸ್ ದಾಖಲಿಸುವುದು ನಂತರ ಹೇಗಾದರೂ ಮಾಡಿ ಈ ದುಷ್ಚಟ ನಿಮೂ೯ಲ ಮಾಡಬೇಕೆಂದು ಸಂದೀಪ್ ಸೇನೆ ಕಟ್ಟಿ ಅಮಾಯಕರನ್ನು ಮತ್ತು ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುತ್ತಾರೆ. ಅಶ್ವಥ್ ರವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ, ಒಬ್ಬರು ಅಮಾಯಕ ಮತ್ತೊಬ್ಬರು ಖಳನಾಯಕ. ಕೊನೆಯಲ್ಲಿ ಅಮಾಯಕ ಪಾತ್ರ ಗೆಲ್ಲುವುದು.
ಇನ್ನೂ ಈ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ, ಅಣ್ಣಾವ್ರ ನಟನೆಗೆ ಸರಿಸಾಟಿ ಯಾರೂ ಇಲ್ಲ. ಹಂಸಲೇಖ ರವರ “ಜನರಿಂದ ನಾನು ಮೇಲೆ ಬಂದೆ ” ಸಾಹಿತ್ಯ ಎಷ್ಟೇ ವರುಷವಾದರೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯೋ ಹಾಗಿದೆ, ಪ್ರೇಮಗೀತೆ “ಪ್ರೇಮ ಕಾಶ್ಮೀರ ” ಪ್ರೇಮಿಗಳಿಗೆ, ಗಂಡ ಹೆಂಡತಿಗೆ ಇಷ್ಟವಾಗುವುದು, ಆಸೆಗಳ ಕುರಿತ ಹಾಡು “ನಾವು ಯಾರಿಗೂ ಕಮ್ಮಿ ಇಲ್ಲ ” ಶ್ರೀಮಂತ ರಿಗೂ ಮತ್ತು ಬಡವರಿಗೂ ಇರೋ ವ್ಯತ್ಯಾಸ ತಿಳಿಸುತ್ತೆ.
ಖ್ಯಾತ ಗಾಯಕರು ದಿ ಎಸ್ ಪಿ ಬಿ ರವರ ಧ್ವನಿಯಲ್ಲಿ ಬಾರೊ ಬಾರೊ ಶ್ರೀ ಕೃಷ್ಣ ಬಾರೋ ಆದಿ ಅನಾದಿಗೂ ಗೀತೆ ಎಷ್ಟು ಪವರ್ ಫುಲ್ ಆಗಿ ಸನ್ನಿವೇಶಕ್ಕೆ ಹೊಂದಿದೆ ಹೇಗೆ ಮಹಾಭಾರತದಲ್ಲಿ ದುಷ್ಟರನ್ನು ಸಂಹಾರ ಮಾಡಲು ಶ್ರೀ ಕೃಷ್ಣ ಅವತಾರ ತಾಳ್ತರೋ ಹಾಗೆ ಚಿತ್ರದಲ್ಲಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಅಣ್ಣಾವೃ ನಡೆಸುವ ಹೋರಾಟಕ್ಕೆ ಕೊನೆಯಲ್ಲಿ ಜಯ ಸಿಗುವುದು.
ಇನ್ನೂ ಚಿತ್ರೀಕರಣ ನನಗೆ ತಿಳಿದ ಹಾಗೆ ರಾಜಾಜಿನಗರ ರಾಮಮಂದಿರ, ಮರಿಯಪ್ಪನ ಪಾಳ್ಯ, ವಿವೇಕಾನಂದ ಕಾಲೇಜು, ಕಾಶ್ಮೀರ ಮತ್ತು ಇತರೆ ಬೆಂಗಳೂರು ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ.
“ಜನರಿಂದ ನಾನು ಮೇಲೆ ಬಂದೆ” ಈ ಗೀತೆಯ ಚಿತ್ರೀಕರಣದಲ್ಲಿ ದೂರದಿಂದ ನೋಡೋ ಭಾಗ್ಯ ನನ್ನದಾಗಿತ್ತು.
ಅವರು ಧರಿಸುತ್ತಿದ್ದ ಪ್ಯಾಂಟ್, ಶಟ್೯.ಸೂಟ್ ಮತ್ತಿತರ ಬಟ್ಟೆಗಳಲ್ಲಿ ಅವರನ್ನು ನೋಡೋದೇ ಆನಂದ.
ಕೊನೆಯ ಮಾತು ಕಲೆಗಾಗಿ, ಅಭಿಮಾನಿಗಳಿಗಾಗಿ, ಅಭಿಮಾನಿಗಳನ್ನು ಪ್ರೀತಿಸೋ, ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ ಕುಮಾರ್, ಅಭಿಮಾನಿಗಳ ಆಸೆಯನ್ನು ಈಡೇರಿಸಿದ ದೇವತಾ ಮನುಷ್ಯ, ಸಹಸ್ರಾರು ಅಭಿಮಾನಿಗಳ ಆಶಯ ಒಂದೇ ಮತ್ತೊಮ್ಮೆ ಈ ಕರುನಾಡಿನಲ್ಲಿ ಹುಟ್ಟಿ ಬನ್ನಿ ದೇವೃ🙏