ಬಾಲಿವುಡ್ನ ಮತ್ತೋರ್ವ ಖ್ಯಾತ ಪ್ರತಿಭಾವ0ತ ಕಲಾವಿದ “ಸುಶಾಂತ್ ಸಿಂಘ್ ರಜ್ಪುತ” ಸಾವಿಗೆ ಶರಣಾಗಿದ್ದಾರೆ..
34ರ ಎಳೆಯ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಎಲ್ಲರನ್ನು ತೊರೆದಿದ್ದಾರೆ.
M.S. ಧೋನಿಯಾಗಿ ಅವರ ಆತ್ಮಚರಿತ್ರೆಯಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಕಾಯ್ ಪೊಚೆ ಇವರ ಮೊದಲ ಸಿನಿಮಾ . ಆತ್ಮಹತ್ಯೆ ವಿರುದ್ದ ಸಮರ ನಡೆಸಿ, ಈಸ್ ಬೇಕು ಇದ್ದು ಜಯಿಸಬೇಕು ಅನ್ನೋ ಸಂದೇಶ ಸಾರುವ “ಚಿಚೊರೆ” ಅನ್ನೊ ಉತ್ತಮವಾದ ಸಿನಿಮಾದಲ್ಲಿ ನಟಿಸಿ ,ಕಡೆಗೆ ಅವರೇ ಆತ್ಮ ಹತ್ಯೆಗೆ ಶರಣಾಗಿರುವುದು ಬದುಕಿನ ವಿಪರ್ಯಾಸವೆ ಸರಿ..
ತೀವ್ರವಾದ ಕಿನ್ನತೆಯಿಂದ ಬಾಳಲುತ್ತಿದ್ದರು ಎಂದು ತಿಳಿದು ಬಂದಿದೆ.
ತಿಂಗಳ ಕೆಳಗೆಷ್ಟೇ ನಟ ಇರ್ಫಾನ್ ಖಾನ್ ಮತ್ತು ರಿಷಿ ಕಪೂರರನ್ನ ಕಳೆದುಕೊಂಡು ಬಾಲಿವುಡ್ ಕಂಬನಿ ಸುರಿಸಿತ್ತು .. ಇದೀಗೆ ಸುಶಾಂತ್ ರ ಅಗಲಿಕೆ ಎಲ್ಲರಿಗೂ ಮತ್ತಷ್ಟು ನೋವನ್ನ ಉಂಟು ಮಾಡಿದೆ.
ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಚಿತ್ರೋದ್ಯಮ.ಕಾಂ ಕೋರುತ್ತದೆ.