ಸ್ಟಾರ್ ಸುವರ್ಣದಲ್ಲಿ ಎಷ್ಟೋ ರಿಯಾಲಿಟಿ ಶೋ ಗಳು ಬಂದು ಹೋಗಿವೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಸುವರ್ಣ ಸೂಪರ್ ಸ್ಟಾರ್ , ಸ್ಟಾರ್ ಸಿಂಗರ್ , ಮುಂತಾದ ಜನಪ್ರಿಯ ಕಾರ್ಯಕ್ರಮಗಳಿಂದ ಹೆಸರಾಗಿರುವ ಸುವರ್ಣ ಟಿವಿ, ಈಗ ಮತ್ತೊಂದು ಜನಪ್ರಿಯ ಕಾರ್ಯಕ್ರಮದ ಮೂಲಕ ಕಿರು ತೆರೆಯ ಜನರನ್ನು ತಣಿಸಲು ಸಿದ್ಧವಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ ರವರ ಸಾರಥ್ಯದಲ್ಲಿ ‘ಇಸ್ಮಾರ್ಟ್ ಜೋಡಿ’ಎಂಬ ರಿಯಾಲಿಟಿ ಶೋ ಜುಲೈ 16 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಘಂಟೆಗೆ ಪ್ರಾರಂಭವಾಗುತ್ತಿದೆ. ಸೆಲಬ್ರಿಟಿ ಕಪಲ್ಸ್ ಗಳು ಪಾಲ್ಗೊಳ್ಳಲಿದ್ದಾರೆ, ಗೋಲ್ಡನ್ ಸ್ಟಾರ್ ಗಣೇಶ್ ರವರು ಈ ಮೊದಲು ಜಿ ಕನ್ನಡ ಚಾನೆಲ್ ಗಾಗಿ ಗೋಲ್ಡನ್ ಗ್ಯಾಂಗ್ಸ್ ಎಂಬ ಕಾರ್ಯಕ್ರಮವನ್ನು ಮಾಡಿ ಯಶಸ್ವೀ ಗೊಳಿಸಿದ್ದರು.
ಈಗ ಮತ್ತೇ ಗೋಲ್ಡನ್ ಸ್ಟಾರ್ ಗಣೇಶ್ ರವರು ಸ್ಟಾರ್ ಸುವರ್ಣದಲ್ಲಿ ‘ಇಸ್ಮಾರ್ಟ್ ಜೋಡಿ’ ಮೂಲಕ ಹೊಸ ರಿಯಾಲಿಟಿ ಶೋ ಒಂದನ್ನು ನಿರೂಪಣೆ ಯನ್ನು ಮಾಡಲಿದ್ದಾರೆ. ಇಸ್ಮಾರ್ಟ್ ಜೋಡಿಯಲ್ಲಿ 40 ವರ್ಷ ಆದ ದಂಪತಿಗಳಿಂದ ಹಿಡಿದು, ಇತ್ತೀಚೆಗೆ ಮದುವೆಯಾದ ದಂಪತಿಗಳ ವರೆಗೂ ಜೋಡಿಗಳು ಇರಲಿವೆ, ಅವರ ಜೀವನದ ಕಷ್ಟ ಸುಖ, ಹೇಳು ಬೀಳು ಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಹೊಸ ರಿಯಾಲಿಟಿ ಶೋ ದ ಮೂಲಕ ಸ್ಟಾರ್ ಸುವರ್ಣ ವು ಮತ್ತೊಮ್ಮೆ ಜನರನ್ನು ರಂಜಿಸಲು ಸಿದ್ಧವಾಗಿದೆ, ಇದಕ್ಕೆ ಚಿತ್ರೋದ್ಯಮ.ಕಾಂ ಶುಭ ಹಾರೈಸುತ್ತಿದೆ.