ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ ಈ ಸಾಲುಗಳು ಕೇಳೋಕೆ ಎಷ್ಟು ಚೆನ್ನಾಗಿದೆ ಅಲ್ವಾ ಫ್ರೆಂಡ್ಸ್ ಮುಸ್ಸಂಜೆ ಮಾತು ಚಿತ್ರದ ಈ ಹಾಡು ಬಹಳಷ್ಟು ಜನಪ್ರಿಯತೆ ಗಳಿಸಿದ ಎಲ್ಲಿ ನೋಡಿದರೂ ಈ ಹಾಡೇ ಇನ್ನೂ ಕೇಳೋಣ ಅನ್ಸುತ್ತೆ.. ಅಂದಹಾಗೆ ಈ ಹಾಡನ್ನು ಹೆಚ್ಚು ಇಷ್ಟ ಪಡೋ ಹಾಗೆ ಮಾಡಿದ ಮ್ಯೂಸಿಕ್ ಮಾಂತ್ರಿಕ ಅವರೇ ಶ್ರೀ ಶ್ರೀಧರ್ ವಿ ಸಂಭ್ರಮ್, ಇಂದು ಅವರಿಗೆ ಜನುಮ ದಿನದ ಶುಭಾಶಯಗಳು ಹೇಳೋಣ…
ಮುಸ್ಸಂಜೆ ಮಾತು ಚಿತ್ರದಿಂದ ಶುರುವಾದ ಸಂಗೀತ ಪಯಣ ದುಬಾಯಿ ಬಾಕು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲ ,ಜೇಡರ ಹಳ್ಳಿ, ಜೈ ಲಲಿತ, ಬೆಳ್ಳಿ, ಇರುವುದೆಲ್ಲವ ಬಿಟ್ಟು, ಆದ್ಯಾ, ಉಪೇಂದ್ರ ಮತ್ತೆ ಬಾ ಹೀಗೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಉತ್ತಮ ಸಂಗೀತ ನೀಡಿ ಗಮನ ಸೆಳೆದಿದ್ದಾರೆ.
ಕೇವಲ ಸಂಗೀತ ನಿರ್ದೇಶಕರಲ್ಲದೆ ಗಾಯಕರೂ, ಗೀತ ರಚನೆಕಾರರು ಕೂಡ .
ಇವರನ್ನು ಮೆಲೋಡಿ ಕಿಂಗ್ ಆಫ್ ಫಿಲಂ ಇಂಡಸ್ಟ್ರಿ ಅಂತ ಕರೆಯೋದಕ್ಕೆ ಕಾರಣ ಇವರು ನೀಡಿದ ಗೀತೆಗಳು ಹೃದಯವೆ ಬಯಸಿದೆ ನಿನ್ನನೇ, ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ, ಕಾದಿರುವೆ ನಿನಗಾಗಿ, ಕದ್ದಳು ಮನಸನ್ನಾ , ಹೇ ಹೃದಯ ಕೇಳಿದೆಯ ಪ್ರೀತಿ ನಿನ್ನ ಪಾಲಲ್ಲ ಹೀಗೆ ಹತ್ತು ಹಲವಾರು ಗೀತೆಗಳು ಜನರಿಗೆ ಆಕಷ೯ಣೆಯಾಗಿದೆ.
ಸಂಗೀತ ನೀಡುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸ್ಟೈಲ್ ಇರುತ್ತದೆ ಇವರದು ವಿಭಿನ್ನ ಸ್ಟೈಲ್ ಆಡಿಯನ್ಸ್ ನ ಹೇಗೆ ಕವರ್ ಮಾಡಬಹುದು ಎಂಬ ಟೆಕ್ನಿಕ್ ಇವರಿಗಿದೆ.
🌹ಕೃಷ್ಣನ್ ಲವ್ ಸ್ಟೋರಿ ಚಿತ್ರದ ಉತ್ತಮ ಸಂಗೀತ ನಿದೇ೯ಶನಕ್ಕೆ ಮಿಚಿ೯ ಅವಾಡ್೯ ಲಭಿಸಿದೆ.
💜ಕೃಷ್ಣ ಲೀಲ ಚಿತ್ರದ ಉತ್ತಮ ಸಂಗೀತಕ್ಕೆ ಕನಾ೯ಟಕ ಸಕಾ೯ರ ಪ್ರಶಸ್ತಿ.
🎸ಇದೇ ಚಿತ್ರಕ್ಕೆ ಉತ್ತಮ ಸಂಗೀತ ನಿದೇ೯ಶಕ ಫಿಲಂ ಫೇರ್ ಪ್ರಶಸ್ತಿ.
ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರದ ಸಂಗೀತ ನಿದೇ೯ಶನ ಫಿಲಂ ಫೇರ್ ಪ್ರಶಸ್ತಿ ನಾಮಿನೇಷನ್ ಕೂಡ ಆದರು.
ಇವರ ಮುಂಬರುವ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಇನ್ನೂ ಅಭಿಮಾನಿಗಳಿನ್ನು ರಂಜಿಸಲಿ ಹಾಗೂ ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸೋಣ 🙏