“Ajnabee” (ಹಿಂದಿ-2001)

ಅಜನಬೀ’ ಎಂದರೆ ಅಪರಿಚಿತ.

ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಹುಷಾರಾಗಿರಬೇಕು. ಅದರಲ್ಲೂ ಅವರಾಗಿಯೇ ನಮ್ಮ ಮೇಲೆ ವಿಶೇಷವಾದ ಗಮನ ತೋರಿಸಿದರೆ ಮತ್ತಷ್ಟು ಹುಷಾರಾಗಿರಬೇಕು. ಅಪರಿಚಿತರ ಸ್ನೇಹ ವಿಶ್ವಾಸಕ್ಕೆ ತಿರುಗುವ ಮುನ್ನ ಅವರ ಹಿನ್ನೆಲೆ ಎಲ್ಲ ತಿಳಿದಿರಬೇಕು. ಇಲ್ಲದಿದ್ದರೆ ಈ ಸಿನೆಮಾದ ನಾಯಕನಿಗೆ ಆದ ಗತಿಯೇ ಆಗುತ್ತದೆ.

ರಾಜ್ ಮತ್ತು ಪ್ರಿಯಾ ಇಬ್ಬರೂ ಸ್ವಿಟ್ಜರ್ಲೆಂಡಿನಲ್ಲಿ ವಾಸವಾಗಿರುವ ಭಾರತೀಯ ದಂಪತಿಗಳು. ಅವರಿಗೆ ಅಲ್ಲಿ ಮತ್ತೋರ್ವ ದಂಪತಿಗಳಾದ ವಿಕ್ರಂ ಮತ್ತು ಸೋನಿಯಾರ ಪರಿಚಯವಾಗುತ್ತದೆ. ವಿಕ್ರಂ ಬಗ್ಗೆ ರಾಜ್ ಏನೇನೂ ತಿಳಿದಿರುವುದಿಲ್ಲ. ಆದರೆ ಸ್ವದೇಶೀ ವ್ಯಾಮೋಹ ವಿಕ್ರಂನ ಜೊತೆ ಸ್ನೇಹ ಬೆಳೆಸುವಂತೆ ಪ್ರೇರೇಪಿಸುತ್ತದೆ.

ಒಮ್ಮೆ ಎರಡೂ ಕುಟುಂಬದವರು ಒಟ್ಟಾಗಿ ರಜೆ ಕಳೆಯಲು ಒಂದು ಕಡೆ ಹೋಗುತ್ತಾರೆ. ಅಲ್ಲಿ ವಿಕ್ರಂ ಏಕಾಂತದಲ್ಲಿ ರಾಜ್ ಬಳಿ ತಮ್ಮ ತಮ್ಮ ಹೆಂಡತಿಯರನ್ನು ಬದಲಿಸಿಕೊಳ್ಳುವ ಪ್ಲಾನ್ ಮುಂದಿಡುತ್ತಾನೆ. ರಾಜ್ ಸಿಟ್ಟು ನೆತ್ತಿಗೇರಿ ಟ್ರಿಪ್ ಕ್ಯಾನ್ಸಲ್ ಮಾಡಿ ಹೆಂಡತಿಯೊಡನೆ ಬಂದು ಬಿಡುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ವಿಕ್ರಂ-ರಾಜ್ ಇಬ್ಬರೂ ಮನಸ್ತಾಪ ಮರೆತು ಒಂದಾಗುತ್ತಾರೆ.

ಸ್ವಲ್ಪ ದಿನದಲ್ಲಿಯೇ ಎಲ್ಲರೂ ಸೇರಿ ವಿಕ್ರಂ ಹುಟ್ಟುಹಬ್ಬ ಆಚರಿಸುತ್ತಾರೆ. ರಾಜ್, ವಿಕ್ರಂ ಇಬ್ಬರೂ ಚೆನ್ನಾಗಿ ಕುಡಿದಿರುತ್ತಾರೆ. ಆಗಲೂ ಒಮ್ಮೆ ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಬಗ್ಗೆ ಕೇಳುತ್ತಾನೆ ವಿಕ್ರಂ. ರಾಜ್ ಮತ್ತೊಮ್ಮೆ ಕೋಪಗೊಂಡು ಆತ ಕೊಟ್ಟಿದ್ದ ಶಾಂಪೇನ್ ಬಾಟಲ್ ಹಿಂತಿರುಗಿಸಿ ಮನೆಗೆ ಬಂದು ಬಿಡುತ್ತಾನೆ.

ಮಾರನೇ ದಿನ ಬೆಳ್ಳಂಬೆಳಿಗ್ಗೆಯೇ ಒಂದು ಹೊಸ ಸುದ್ದಿ ಗೊತ್ತಾಗುತ್ತದೆ…. ಏನೆಂದರೆ ವಿಕ್ರಂ ಹೆಂಡತಿಯ ಕೊಲೆಯಾಗಿರುತ್ತದೆ!!! ಕೊಲೆ ಒಂದು ಶಾಂಪೇನ್ ಬಾಟಲಿನಿಂದ ಹೊಡೆದು ಆಗಿರುತ್ತದೆ ಮತ್ತು ಆ ಶಾಂಪೇನ್ ಬಾಟಲ್ ಮೇಲೆ ರಾಜ್ ಫಿಂಗರ್ ಪ್ರಿಂಟ್ ಇರುತ್ತದೆ !!!

ಇದು ಹೇಗೆ ಅಂತ ಗೊತ್ತಾಯ್ತಾ….?

ಹಿಂದಿನ ದಿನ ವಿಕ್ರಂ ಹೆಂಡತಿಯರ ಎಕ್ಸಚೇಂಜ್ ಪ್ರಸ್ತಾಪ ಮುಂದಿಟ್ಟಾಗ ರಾಜ್ ಶಾಂಪೇನ್ ಬಾಟಲ್ ಹಿಂತಿರುಗಿಸಿದ್ದನಲ್ಲ… ಅದು ಅದೇ ಬಾಟಲ್!! ಪೊಲೀಸರಿಗೆ ಕೊಲೆಗೆ ಸಾಕ್ಷಿ ಸಿಕ್ಕಿದ್ದೇ ತಡ ರಾಜ್ ನನ್ನು ಅರೆಸ್ಟ್ ಮಾಡುತ್ತಾರೆ.

ಇದರಿಂದ ಗೊತ್ತಾಗುವುದು ಏನೆಂದರೆ…

ವಿಕ್ರಂ ತನ್ನ ಹೆಂಡತಿಯನ್ನು ಸಾಯಿಸಲು ಒಂದು ಪಕಡ್ಬಂದಿಯಾದ ಪ್ಲಾನ್ ರಚಿಸಿ ರಾಜ್ ನನ್ನು ಅದರೊಳಗೆ ಸಿಗಹಾಕಿಸಿದ್ದಾನೆ ಅಂತ. ಈಗ ರಾಜ್ ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಪ್ಲಾನ್ ಶಕ್ತವಾಗಿದೆ.

ವಿಕ್ರಂ ಹಾಗೆ ಮಾಡಲು ಕಾರಣವೇನೆಂದರೆ, ಆತನ ಹೆಂಡತಿಯ ಹೆಸರಿನಲ್ಲಿರುವ ಲೈಫ್ ಇನ್ಶ್ಯೂರೆನ್ಸಿನ ಮೊತ್ತ. ಒಂದೇ ಕಲ್ಲಿಗೆ ಆತ ಎರಡು ಹಕ್ಕಿ ಹೊಡೆ್ಸದ. ಒಂದು ಕಲ್ಲಿಗೆ ಹೆಂಡತಿ ಸತ್ತ ದುಡ್ಡು ಸಿಕ್ಕಿತು, ಮತ್ತೊಂದು ಕಲ್ಲಿಗೆ ಆತ ಆಕೆಯ ಕೊಲೆ ಕೇಸಿನಿಂದಲೂ ತಪ್ಪಿಸಿಕೊಂಡ. ಅಮಾಯಕನಾದ ರಾಜ್ ಸಿಕ್ಕಿಹಾಕಿಕೊಂಡ.

ಅದಕ್ಕೇ ಹೇಳುವುದು ಅಪರಿಚಿತರನ್ನು ನಂಬುವಾಗ ಹುಷಾರಾಗಿರಬೇಕು ಅಂತ!!

ಈಗ ಕಾಣದ ದೇಶದಲ್ಲಿ ಈ ಕೊಲೆ ಆಪಾದನೆಯಿಂದ ಹೇಗೆ ತಪ್ಪಿಸಿಕೊಳ್ಳುತ್ತಾನೆ ರಾಜ್?? ಸಾಕ್ಷಿಗಳೆಲ್ಲಾ ಆತನಿಗೆ ವಿರುದ್ಧವಾಗಿರುವಾಗ ವಿಕ್ರಂನನ್ನು ಹೇಗೆ ಕೊಲೆಗಾರ ಅಂತ ಪ್ರೂವ್ ಮಾಡುತ್ತಾನೆ? ಆತ ಇನ್ಶ್ಯೂರೆನ್ಸ್ ಮೊತ್ತ ಪಡೆಯದಂತೆ ಹೇಗೆ ತಡೆಯುತ್ತಾನೆ?

ಬಹಳ ಇಂಟ್ರೆಸ್ಟಿಂಗ್ ಆಗಿದೆ ಸಿನೆಮಾ.

ಬಾಬ್ಬಿ ಡಿಯೋಲ್, ಅಕ್ಷಯ್ ಕುಮಾರ್, ಕರೀನಾ ಕಪೂರ್, ಬಿಪಾಶಾ ಬಸು ಎಲ್ಲರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲರಿಗೂ ಫುಲ್ ಮಾರ್ಕ್ಸ್ ಕೊಡಬಹುದು.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply