DUKHTAR ..ಮಗಳು
2014 ರ academy awards ಉತ್ತಮ ವಿದೇಶಿ ಚಿತ್ರಕ್ಕೆ ಪಾಕಿಸ್ತಾನದಿಂದ ನಾಮಕರಣವಾದ ಚಿತ್ರ…
ಒಬ್ಬ ಅಮ್ಮ ತನ್ನ ಮಗಳಿಗೋಸ್ಕರ ಏನೇನೆಲ್ಲಾ ಮಾಡಬಲ್ಲಳು ಎಂದು ತೋರಿಸಿಕೊಟ್ಟ ಮೊದಲ ಪಾಕಿಸ್ತಾನಿ ಮಹಿಳಾ ನಿರ್ದೇಶಕಿಯ ಚಿತ್ರ.
ಅಲ್ಲಾ ರಖಿ , ಅಮ್ಮ ಮದುವೆಯಾಗಿದ್ದು ತನಗಿಂತಲೂ ತುಂಬಾ ಪ್ರಾಯದ ಹಾಗೂ ಒಂದು ಬುಡಕಟ್ಟು ನಾಯಕ ದೌಲತ್ ಖಾನ್ ಜೊತೆ..ಲಾಹೋರಿನಲ್ಲಿ ಬೆಳೆದ ಈಕೆ ಪರ್ವತ ಪ್ರದೇಶದಲ್ಲಿ ವಾಸಿಸಬೇಕಾಗಿದ್ದು ಆಕೆಯ ಪರಿಸ್ಥಿತಿ.
ಬುಡಕಟ್ಟು ಅಂದ ಮೇಲೆ ಜಗಳಗಳು ಇದ್ದದ್ದೇ…ಹಾಗೇ ಎರಡು ದಶಕಗಳ ನಂತರ ಇನ್ನೊಂದು ಬುಡಕಟ್ಟಿನ ಜೊತೆ ಸಂಝೋತಿಗೋಸ್ಕರ ದೌಲತ್ ಖಾನ್ ತನ್ನ ಮಗಳು ೧೦ರ ಹರಯದ ಝೈನಾಬ್ ಳನ್ನು ಆ ಬುಡಕಟ್ಟಿನ ಅಜ್ಜ ತೋರ್ ಗುಲ್ ನೊಂದಿಗೆ ಮದುವೆ ನಿಶ್ಚಯಿಸುತ್ತಾನೆ..
ಈಗ ಅಮ್ಮನಿಗೆ ಇರುವ ಒಂದೇ ದಾರಿ ಮಗಳನ್ನು ರಕ್ಷಿಸುವುದು…ತನ್ನ ಹಾಗೇ ಮಗಳೂ ಆಗಬಾರದಲ್ಲಾ!
ಹೋಗಬೇಕಿರುವುದು ಲಾಹೋರಿಗೆ, ತನ್ನ family ಇದ್ದಲ್ಲಿಗೆ…
ಹೋಗಬೇಕಿರುವ ದಾರಿ ಸಂಪೂರ್ಣ ಪಾಕಿಸ್ತಾನದ ಗುಡ್ಡಗಾಡು ಪ್ರದೇಶ…ಹಿಂಬಾಲಿಸುತ್ತಿರುವ ಗಂಡನ local ಸೇನೆ ಬೇರೆ..
ಆಗ ಸಿಗುವವ ಸೊಹೈಲ್..ಟ್ರಕ್ ಡ್ರೈವರ್ …ಮೊದಲು ಮುಜಾಹಿದೀನ್ ಆಗಿದ್ದವ…
ಆತನ ಟ್ರಕ್ ಒಂದು ಹೊಸ ಕತೆ…
ಮುಂದೇನು?!
ಒಂದು ಅತ್ಯುತ್ತಮ ಚಿತ್ರ...
ಏನೂ ಸಿಗಲಿಲ್ಲ ಅಂದ್ರೂ ಪಾಕಿಸ್ತಾನದ ಹಂಝಾ ಕಣಿವೆ ಕಣ್ಣಿಗೆ ಹಬ್ಬ…