Parasite(2019)

Parasite(2019)
ಪರಾವಲಂಬಿ…ಒಂಥರಾ ಬನ್ನಣಿಗೆ ಯ ತರ…
ಇಷ್ಟರಲ್ಲೇ ಕತೆ ಅರ್ಥವಾಗಿರಬಹುದು.
ಅಂತಂದು ಇದು ತಮಿಳುಗನ್ನಡ ಹಳಸೇಲು ಚಿತ್ರದಂತಿಲ್ಲ( ಯಾಕೆ ಉದಾಹರಿಸಿದೆ ಅಂದರೆ, ನನ್ನ ತಮಿಳು ಸಹೋದ್ಯೋಗಿಯೊಡನೆ ಇದರ synopsis ಹಂಚಿಕೊಳ್ಳುತ್ತಿದ್ದಂತೆ ಆತನ ಪ್ರಕಾರ, ತಮಿಳಿನಲ್ಲೂ ಈ ತರಾ ಚಿತ್ರ ಇದೆ..ಒಬ್ಬ ತನ್ನ ಇಡೀ familyಯನ್ನ ಒಬ್ಬರ ಮನೆಯಲ್ಲಿ ಕೆಲಸಕ್ಕಿರಿಸುತ್ತಾನೆ….ಆದರೆ ಆತ ಆಗರ್ಭ ಶ್ರೀಮಂತ

😀

ನಾ ಕೇಳಿದೆ…ಆ ಮನೆಯ ಹೆಣ್ಣುಮಗಳ‌‌ನ್ನು ಈತ ಪ್ರೀತಿಸುತ್ತಿದ್ದನೇ?….
ಹೌದು…ನಿಮಗೆ ಹೇಗೆ ಗೊತ್ತು?)

ಇದು ಅಂತಹಾ ಚಿತ್ರ ಅಲ್ಲ..
ಎರಡು ತದ್ವಿರುದ್ಧ ಕ್ಲಾಸ್‌ಗಳ ನಡುವೆ ನಡೆವಂತಹಾ ಕತೆ.
ಒಂದು ರಾತ್ರಿಯ drinksಗೂ ಪರದಾಡುವ ಕಿಮ್ ಕ್ಲಾನ್ ಸಂಸಾರ ಮತ್ತು ಮನೆಯ ಪ್ರತಿ ವಸ್ತುಗಳಲ್ಲೂ ಕಲೆಯನ್ನು ಕಾಣುವ ಹಾಗೂ ವಾಸನೆಯಲ್ಲೇ ಪ್ರತಿಯೊಬ್ಬರನ್ನೂ ಗ್ರಹಿಸುವ ಶ್ರೀಮಂತ ಪಾರ್ಕ್‌ನ ಸಂಸಾರ…
Sophisticated ಮತ್ತು reality ಗಳ ನಡುವಿನ ಗೊಂದಲಗಳು…
ಇದೆಲ್ಲದರ ನಡುವೆ ಮನೆಯ ರಹಸ್ಯ ಕೋಣೆಯಲ್ಲಿ(ಬಂಕರ್‌ನ ತರಹ) ನೆಲೆಸಿರುವ , ಕೆಲಸದಾಕೆಯ ಗಂಡ…ಆತನನ್ನೇ ದೆವ್ವ‌ವೆಂದು ಭಾವಿಸಿರುವ ಡ ಸಾಂಗ್.
ಸರಳವಾದ ಕತೆ…
ಕೊನೆಯಲ್ಲಿ ನಿರ್ದೇಶಕನ ಅಂತರ್ಯ ಏನು? ಏನನ್ನು
ಸಾಧಿಸಲು/ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗದಿದ್ದರೂ…ಅದೇ ತುಮುಲಗಳನ್ನು ಹೊಸಬಗೆಯಲ್ಲಿ ತೋರಿಸಿ ಗೆದ್ದಿದ್ದಾರೆ. ದಕ್ಷಿಣ ಕೊರಿಯಾದ ಈ ಚಿತ್ರಕ್ಕೆ ೪ oscar ಲಭಿಸಿದ್ದು ನಿಜಕ್ಕೂ ಶ್ಲಾಘನೀಯ.

ಹಾಗೆಯೇ ಕೊರಿಯನ್ ಭಾಷೆ ಅಪ್ಪನನ್ನು ಅಪ್ಪ ಅಮ್ಮನನ್ನು ಅಮ್ಮಾ ಅಂದರೆ..ಚಿತ್ರಗಳು ನಮ್ಮದೇ nativityಯನ್ನು ಧ್ವನಿಸುತ್ತದೆ.
IMDB:8.6
ನಾ ವೀಕ್ಷಿಸಿದ್ದು Telegram app ಮೂಲಕ…

ಖಂಡಿತಾ ನೋಡಬೇಕಾದ ಚಿತ್ರ

Rajesh Aithal

Rajesh Aithal

Leave a Reply